Gold 24k: ₹14,395 0
Gold 22k: ₹13,195 0
Gold 18k: ₹10,795 0
Silver 10g: ₹2,300 0
Sensex: 78,428.95 (-0.27%)
Nifty: 24,614.90 (-0.64%)
Gold 24k: ₹14,395 0
Gold 22k: ₹13,195 0
Gold 18k: ₹10,795 0
Silver 10g: ₹2,300 0
Sensex: 78,428.95 (-0.27%)
Nifty: 24,614.90 (-0.64%)

ಮಾರುಕಟ್ಟೆ ಏರಿಳಿತದ ನಡುವೆಯೂ ಯಶಸ್ವಿ ಹೂಡಿಕೆ - ಅಸೆಟ್ ಅಲೋಕೇಷನ್ ಸೂತ್ರದ ಕಂಪ್ಲೀಟ್ ಗೈಡ್!!

ಸಂಪತ್ತು ಸೃಷ್ಟಿ ಮತ್ತು ಹಣಕಾಸಿನ ಭವಿಷ್ಯವನ್ನು ಗಟ್ಟಿಗೊಳಿಸಲು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಅತ್ಯುತ್ತಮ ಮಾರ್ಗ. ಆದರೆ, ಹೂಡಿಕೆ ಆರಂಭಿಸುವಾಗ ಪ್ರತಿಯೊಬ್ಬರ ಮುಂದೆಯೂ ಬರುವ ಪ್ರಮುಖ ಪ್ರಶ್ನೆ - ಈಕ್ವಿಟಿ ಫಂಡ್‌ಗಳು (Equity Funds) ಅಥವಾ ಡೆಬ್ಟ್ ಫಂಡ್‌ಗಳು (Debt Funds), ಇವೆರಡರಲ್ಲಿ ಯಾವುದು ನಮಗೆ ಸೂಕ್ತ? ಇವೆರಡೂ ಮ್ಯೂಚುವಲ್ ಫಂಡ್ ಪ್ರಪಂಚದ ಎರಡು ಪ್ರಮುಖ ಸ್ತಂಭಗಳಾಗಿದ್ದು, ವಿಭಿನ್ನ ರಿಸ್ಕ್ (ಅಪಾಯ) ಮತ್ತು ರಿಟರ್ನ್ (ಲಾಭ) ಪ್ರೊಫೈಲ್ ಹೊಂದಿವೆ. ಇವುಗಳ ನಡುವಿನ ವ್ಯತ್ಯಾಸವನ್ನು ಸರಿಯಾಗಿ ಅರ್ಥೈಸಿಕೊಂಡು ಹೂಡಿಕೆ ಮಾಡುವುದರಿಂದ ನಮ್ಮ ಹಣಕಾಸು ಗುರಿಗಳನ್ನು ಸುಲಭವಾಗಿ ತಲುಪಬಹುದು.

www.pexels.com

ಮೊದಲನೆಯದಾಗಿ, ಈಕ್ವಿಟಿ ಫಂಡ್‌ಗಳು ತಮ್ಮ ಹೆಚ್ಚಿನ ಹಣವನ್ನು ವಿವಿಧ ಕಂಪನಿಗಳ ಷೇರುಗಳಲ್ಲಿ (Stocks) ತೊಡಗಿಸುತ್ತವೆ. ಇವು ಸ್ಮಾಲ್-ಕ್ಯಾಪ್, ಮಿಡ್-ಕ್ಯಾಪ್ ಅಥವಾ ಲಾರ್ಜ್-ಕ್ಯಾಪ್ ಕಂಪನಿಗಳಾಗಿರಬಹುದು. ಈಕ್ವಿಟಿ ಫಂಡ್‌ನಲ್ಲಿ ಹೂಡಿಕೆ ಮಾಡುವುದೆಂದರೆ, ನೀವು ಆಯಾ ಕಂಪನಿಗಳ ಸಣ್ಣ ಪ್ರಮಾಣದ ಪಾಲುದಾರರಾದಂತೆ. ದೇಶದ ಆರ್ಥಿಕ ಬೆಳವಣಿಗೆ ಮತ್ತು ಕಂಪನಿಗಳ ಲಾಭದ ಸವಿಯನ್ನು ನೀವು ನೇರವಾಗಿ ಅನುಭವಿಸಬಹುದು.

ಷೇರು ಮಾರುಕಟ್ಟೆಯು ತೀವ್ರ ಏರಿಳಿತಗಳಿಂದ ಕೂಡಟ್ಟಿರುವುದರಿಂದ, ಅಲ್ಪಾವಧಿಯಲ್ಲಿ ಈಕ್ವಿಟಿ ಫಂಡ್‌ಗಳು ಕೊಂಚ ಅಪಾಯಕಾರಿ (High Risk). ಆದರೆ, ಇತಿಹಾಸವನ್ನು ಗಮನಿಸಿದರೆ ದೀರ್ಘಾವಧಿಯಲ್ಲಿ (5 ರಿಂದ 7 ವರ್ಷ ಅಥವಾ ಅದಕ್ಕಿಂತ ಹೆಚ್ಚು) ಹಣದುಬ್ಬರವನ್ನು ಮೀರಿಸಿ ಗರಿಷ್ಠ ಲಾಭ (High Returns) ನೀಡುವ ಸಾಮರ್ಥ್ಯ ಇವುಗಳಿಗಿದೆ. ಮನೆ ಖರೀದಿ, ಮಕ್ಕಳ ಉನ್ನತ ಶಿಕ್ಷಣ ಅಥವಾ ನಿವೃತ್ತಿ ಯೋಜನೆಯಂತಹ ಸುದೀರ್ಘಾವಧಿಯ ಗುರಿಗಳಿಗೆ ಈಕ್ವಿಟಿ ಫಂಡ್‌ಗಳು ಅತ್ಯಂತ ಸೂಕ್ತ.

ಮತ್ತೊಂದೆಡೆ, ಡೆಬ್ಟ್ ಫಂಡ್‌ಗಳು ತಮ್ಮ ಬಂಡವಾಳವನ್ನು ಸ್ಥಿರ ಆದಾಯ ತರುವ ಸಾಲಪತ್ರಗಳಲ್ಲಿ ಅಂದರೆ ಸರ್ಕಾರಿ ಬಾಂಡ್‌ಗಳು, ಕಾರ್ಪೊರೇಟ್ ಡಿಬೆಂಚರ್‌ಗಳು, ಟ್ರೆಜರಿ ಬಿಲ್ಲುಗಳು ಮತ್ತು ವಾಣಿಜ್ಯ ಪತ್ರಗಳಲ್ಲಿ ತೊಡಗಿಸುತ್ತವೆ. ಸರಳವಾಗಿ ಹೇಳುವುದಾದರೆ, ಇಲ್ಲಿ ನೀವು ನಿಮ್ಮ ಹಣವನ್ನು ಸರ್ಕಾರಕ್ಕೋ ಅಥವಾ ಹೆಸರಾಂತ ಕಂಪನಿಗಳಿಗೋ ಸಾಲವಾಗಿ ನೀಡುತ್ತೀರಿ. ಇದಕ್ಕೆ ಪ್ರತಿಯಾಗಿ ಅವರು ನಿಗದಿತ ಬಡ್ಡಿ ಮತ್ತು ಗಡುವಿನ ಕೊನೆಯಲ್ಲಿ ಅಸಲು ಹಣವನ್ನು ಪಾವತಿಸುತ್ತಾರೆ.

ಷೇರು ಮಾರುಕಟ್ಟೆಯ ಏರಿಳಿತಗಳ ಪ್ರಭಾವ ಇವುಗಳ ಮೇಲಿರುವುದಿಲ್ಲ. ಹೀಗಾಗಿ ಡೆಬ್ಟ್ ಫಂಡ್‌ಗಳು ಕಡಿಮೆ ಅಪಾಯವನ್ನು (Low Risk) ಹೊಂದಿದ್ದು, ಬಂಡವಾಳದ ಸುರಕ್ಷತೆ ಮತ್ತು ಸ್ಥಿರ ಆದಾಯವನ್ನು ನೀಡುತ್ತವೆ. ಅಲ್ಪಾವಧಿಯ ಗುರಿಗಳು, ತುರ್ತು ನಿಧಿ (Emergency Fund) ಕಾಯ್ದಿರಿಸಲು ಮತ್ತು ಷೇರು ಮಾರುಕಟ್ಟೆಯ ರಿಸ್ಕ್ ತೆಗೆದುಕೊಳ್ಳಲು ಇಷ್ಟವಿಲ್ಲದ ಕನ್ಸರ್ವೇಟಿವ್ ಹೂಡಿಕೆದಾರರಿಗೆ ಇವು ಸೂಕ್ತ. ಈಕ್ವಿಟಿ ಫಂಡ್‌ನಲ್ಲಿ ಹೂಡಿಕೆ ಮಾಡುವುದೆಂದರೆ, ನೀವು ಆಯಾ ಕಂಪನಿಗಳ ಸಣ್ಣ ಪ್ರಮಾಣದ ಪಾಲುದಾರರಾದಂತೆ. ದೇಶದ ಆರ್ಥಿಕ ಬೆಳವಣಿಗೆ ಮತ್ತು ಕಂಪನಿಗಳ ಲಾಭದ ಸವಿಯನ್ನು ನೀವು ನೇರವಾಗಿ ಅನುಭವಿಸಬಹುದು.

ಆದ್ದರಿಂದ, ಈಕ್ವಿಟಿ ಮತ್ತು ಡೆಬ್ಟ್ ಫಂಡ್‌ಗಳಲ್ಲಿ ಯಾವುದು ಉತ್ತಮ ಎಂಬುದು ಸಂಪೂರ್ಣವಾಗಿ ನಿಮ್ಮ ವೈಯಕ್ತಿಕ ಹಣಕಾಸು ಗುರಿ, ಹೂಡಿಕೆ ಮಾಡುವ ಕಾಲಾವಧಿ ಮತ್ತು ನಿಮ್ಮ ರಿಸ್ಕ್ ತಡೆಯುವ ಸಾಮರ್ಥ್ಯದ ಮೇಲೆ ಆಧಾರಪಟ್ಟಿರುತ್ತದೆ. ಹಣಕಾಸು ತಜ್ಞರ ಪ್ರಕಾರ, ಇವೆರಡರಲ್ಲಿ ಒಂದನ್ನೇ ಆಯ್ಕೆ ಮಾಡುವ ಬದಲು, ಎರಡನ್ನೂ ಸೂಕ್ತ ಪ್ರಮಾಣದಲ್ಲಿ ಸಂಯೋಜಿಸಿ (Asset Allocation) ಪೋರ್ಟ್‌ಫೋಲಿಯೋ ನಿರ್ಮಿಸುವುದು ಜಾಣತನ. ಸರಳವಾಗಿ ಹೇಳುವುದಾದರೆ, ಇಲ್ಲಿ ನೀವು ನಿಮ್ಮ ಹಣವನ್ನು ಸರ್ಕಾರಕ್ಕೋ ಅಥವಾ ಹೆಸರಾಂತ ಕಂಪನಿಗಳಿಗೋ ಸಾಲವಾಗಿ ನೀಡುತ್ತೀರಿ.

ಯುವಕರು ಮತ್ತು ಸುದೀರ್ಘ ಸಮಯ ಹೊಂದಿರುವವರು ಈಕ್ವಿಟಿ ಫಂಡ್‌ಗಳಿಗೆ ಹೆಚ್ಚಿನ ಶೇಕಡಾವಾರು ಹಣ ನೀಡಬಹುದು. ವಯಸ್ಸಾಗುತ್ತಿದ್ದಂತೆ ಮತ್ತು ನಿವೃತ್ತಿ ಹತ್ತಿರವಾಗುತ್ತಿದ್ದಂತೆ ಬಂಡವಾಳದ ಸುರಕ್ಷತೆಗಾಗಿ ಡೆಬ್ಟ್ ಫಂಡ್‌ಗಳ ಕಡೆಗೆ ಹಣವನ್ನು ವರ್ಗಾಯಿಸಬಹುದು. ಈ ಮೂಲಕ ಈಕ್ವಿಟಿಯ ವೇಗದ ಬೆಳವಣಿಗೆ ಮತ್ತು ಡೆಬ್ಟ್‌ನ ಸ್ಥಿರತೆ ಎರಡನ್ನೂ ಪಡೆದು ಯಶಸ್ವಿ ಹೂಡಿಕೆದಾರರಾಗಬಹುದು. ಸಂಪತ್ತು ಸೃಷ್ಟಿ ಮತ್ತು ಹಣಕಾಸಿನ ಭವಿಷ್ಯವನ್ನು ಗಟ್ಟಿಗೊಳಿಸಲು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಅತ್ಯುತ್ತಮ ಮಾರ್ಗ. ಆದರೆ, ಹೂಡಿಕೆ ಆರಂಭಿಸುವಾಗ ಪ್ರತಿಯೊಬ್ಬರ ಮುಂದೆಯೂ ಬರುವ ಪ್ರಮುಖ ಪ್ರಶ್ನೆ - ಈಕ್ವಿಟಿ ಫಂಡ್‌ಗಳು (Equity Funds) ಅಥವಾ ಡೆಬ್ಟ್ ಫಂಡ್‌ಗಳು (Debt Funds), ಇವೆರಡರಲ್ಲಿ ಯಾವುದು ನಮಗೆ ಸೂಕ್ತ.

Equity

Comments

Sign in to comment
Please to leave a comment on this article.
Subscribe to Our Newsletter

Get the latest articles delivered to your inbox.

Popular News

Related Articles

Leopard Attacks Forest Officer During Rescue in Karnataka!
Leopard Attacks Forest Officer During Rescue in Karnataka!